Banner 160x300

Ambigara Chowdaiah Vachanagalu in Kannada

ಇದನ್ನು PDF Format ನಲ್ಲಿ Download ಮಾಡಿಕೊಳ್ಳಲು ಇಲ್ಲಿ Click ಮಾಡಿ.


12ನೇ ಶತಮಾನದ ಕನ್ನಡ ವಚನಕಾರರು
ಶ್ರೀ ಅಂಬಿಗರ ಚೌಡಯ್ಯ
ಅಂಬಿಗರ ಚೌಡಯ್ಯನ
ವಚನಗಳು

(1)
ನೇಮಿಸ್ಥಲನೆಂಬ ಕರ್ಮಿ,
ಶೀಲವಂತನೆಂಬ ಸಂದೇಹಿ,
ಭಾಷ್ಯವಂತನೆಂಬ ಬ್ರಹ್ಮೇತಿಕಾರ,
ಇವರು ಮೂವರು ಕುಳಿತಲ್ಲಿ ಕುಳ್ಳಿರಲಾಗದು,
ನಿಂತಲ್ಲಿ ನಿಲ್ಲಲಾಗದು, ಹೋಹ ಬಟ್ಟೆಯಲ್ಲಿ ಹೋಗಲಾಗದು,
ಇವರು ಮೂವರಿಗೆ ಗುರುವಿಲ್ಲ, ಲಿಂಗವಿಲ್ಲವೆಂದಾತ, ನಮ್ಮ ಅಂಬಿಗರ ಚೌಡಯ್ಯ.

(2)
ಮದ್ದು ತಿನ್ನ ಬೇಕಾದರೆ ವೈದ್ಯನಿದ್ದಲ್ಲಿಗೆ ಹೋಗಿ,
ಹಣ - ಹೊನ್ನನು ಕೊಟ್ಟು ದೈನಂಬಟ್ಟು ತಂದು 
ತಿಂಬರು ನೋಡಯ್ಯ,
ಇದು ಶುದ್ದ ಸಿದ್ದ ಪ್ರಸಾದಕ್ಕೆ ಎಂದು ಬಿನ್ನಹ ಮಾಡದೆ, ತಾವಿರ್ದೆಡೆಗೆ ಅಹಂಕಾರದಲ್ಲಿ ತರಿಸಿಕೊಂಬ
ಗೊಡ್ಡ ಮೂಳನ ಕಂಡರೆ ಒದ್ದೊದ್ದು ಕೊಲ್ಲೆಂದಾತ, ನಮ್ಮ ಅಂಬಿಗರ ಚೌಡಯ್ಯ.

(3)
ಕರದಲ್ಲಿ ಲಿಂಗವ ಪಿಡಿದುಕೊಂಡು,
ಕಣ್ಣು ಮುಚ್ಚಿ ಸರ ಜಪಮಾಲೆಯ
ಬೆರಳಿಂದ ಎಳೆದೆಳೆದು ಎಣಿಸುತ್ತ 
ಗುರುಮೂರ್ತಿಯ ಧ್ಯಾನಿಸುತ್ತ ಕಂಡೆನೆಂಬುತ್ತ 
ಇರುವರೆ? ಮೂಳರಿರಾ, ನಿಮಗೆಲ್ಲಿಯದೋ ಗುರುಧ್ಯಾನ,
ವರ ಪರವಸ್ತುವಿಗೆ ಸರಿಯೆನಿಸಿಕೊಂಬ
ಗುರುಸ್ವಾಮಿ ನಿಮ್ಮ ನೆರೆ ಹೊರೆಯ
ಸರಿಸಮೀಪ ಗ್ರಾಮದಲ್ಲಿರಲು
ಅವರನು ಲೆಕ್ಕಿಸದೆ, ಉದಾಸೀನವ ಮಾಡಿಕಂಡು
ನಿನ್ನ ಉಂಬ ಉಡುವ ಸಿರಿಸಂಪತ್ತಿನೋಳು
ಅವರನು ಸತ್ಕರಿಸಿದರೆ
ಕರದಲ್ಲಿ ನೋಡಿ ಕಂಡಿಹೆನೆಂದು,
ಸಿರವಂ ಬಿಗಿದು, ಕಣ್ಣನೆ ತೆರೆಯದೆ
ಸ್ವರದ ರಾಗ ಪಿಟಿ ಪಿಟಿ ಎನ್ನುತ್ತಾ
ಅರಿದೆವೆಂಬ ಅರಿವಿಂಗೆ ಸಿರದೂಗಿ ನಗುತಿರ್ದು 
ನಮ್ಮ ಅಂಬಿಗರ ಚೌಡಯ್ಯ.

(4)
ಅರಿಯದ ಗುರು, ಅರಿಯದ ಶಿಷ್ಯ ಇವರಿಬ್ಬರಿಗೇನಷ್ಟು ದೋ
ಕುರುಡ, ಕುರುಡನ ಕೈಯ್ಯ ಪಿಡಿದು ಪಥವ ನಡೆಯಬಲ್ಲರೇ?
ತೊರೆಯಲದ್ದಿ ಹೋಹವನ ಈಸರಿಯದವ ತೆಗೆದಂತಾಯಿತ್ತೆಂದ ಅಂಬಿಗರ ಚೌಡಯ್ಯ.

(5)
ಬಡತನಕ್ಕೆ ಉಂಬುವ ಚಿಂತೆ,
ಉಂಡರೆ ಉಡುವ ಚಿಂತೆ,
ಉಡಲಾದರೆ ಇಡುವ ಚಿಂತೆ,
ಇಡಲಾದರೆ ಹೆಂಡರ ಚಿಂತೆ,
ಹೆಂಡರಾದರೆ ಮಕ್ಕಳ ಚಿಂತೆ,
ಮಕ್ಕಳಾದರೆ ಬದುಕುವ ಚಿಂತೆ,
ಬದುಕಾದರೆ ಕೇಡಿನ ಚಿಂತೆ,
ಕೇಡಾದರೆ ಮರಣದ ಚಿಂತೆ,
ಇಂತೀ ಹಲವು ಚಿಂತೆಯಲ್ಲಿ -
ಇಪ್ಪವರನ್ನು ಕಂಡೆನು,
ಶಿವಚಿಂತೆ ಇದ್ದವರನೊಬ್ಬರನೂ,
ಕಾಣೆನೆಂದಾತ ಅಂಬಿಗರ ಚೌಡಯ್ಯ.

(6)
ಅಗ್ನಿ ದಿಟವೆಂದರೆ ತಾ ಹುಸಿ,
ಕಾಷ್ಠವಿಲ್ಲದೆ, ಕಾಷ್ಠದಲ್ಲಡಗಿ ಸುಡದಿಪ್ಪ ಭೇದವನರಿದೊಡೆ,
ಪ್ರಾಣಲಿಂಗ ಎಂದೆಂಬೆನೆಂದ ಅಂಬಿಗರ ಚೌಡಯ್ಯ.

(7)
ಅರಿವನರಿದಲ್ಲಿ ತಾನೆನ್ನದೆ, ಇರಿದೆನ್ನದೆ, ಮತ್ತೇನುವ ಸಂಪಾದಿಸದೆ,
ಅರುಣನ ಕಿರಣದಲ್ಲಿ ಅರತ ಸಾರದಂತೆ,
ಕಾದ ಹಂಚಿನ ಮೇಲೆ ಬಿಟ್ಟ ನೀರಿನಂತೆ,
ಬಧಿರನ ಕಾವ್ಯದಂತೆ ಚದುರಿದ ಬಳ್ಳನಂತೆ, ತಲೆದೋರದೆ ನಿಂದಾತನಡಿಗೆ ಎರಗುವೆ ನೆಂದಾತ ಅಂಬಿಗರ ಚೌಡಯ್ಯ.

(8)
ಅರ್ಚನೆಯ ಮಾಡುವಲ್ಲಿ ವೇಷವಂತಿರಬೇಕು, ಪೂಜೆಯ ಮಾಡುವಲ್ಲಿ ಪುಣ್ಯಮೂರ್ತಿಯಾಗಿರಬೇಕು, ಕೊಳು - ಕೊಡೆಯಲ್ಲಿ ಭೂತ ಹಿತವಾಗಿರಬೇಕು,
ಇಂತೀ ಸಡಗರಿಸಿ ಗೊಂಡಿಪ್ಪಾ ತನಡಿಗೆರಗುವೆ ನೆಂದಾತ ಅಂಬಿಗರ ಚೌಡಯ್ಯ. 

(9)
ಅಸುರರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ, ಬ್ರಹ್ಮಕಪಾಲವಿಲ್ಲ,
ಭಸ್ತ ಭೂಷಣನಲ್ಲ, ಖುಷಿಯ ಮಗಳೊಡನಿರ್ದಾತನಲ್ಲ,
ಎಸಗುವ ಸಂಸಾರದ ಕುರುಹಿಲ್ಲದಾತಂಗೆ ಹೆಸರಾವುದೆಂದ ಅಂಬಿಗರ ಚೌಡಯ್ಯ.

(10)
ಅಂದ - ಚಂದವ ಬಿಟ್ಟು ಮಂಡಿ ಬೋಳದ,
ಮತ್ತೆ ಲಿಂಗಕ್ಕೆ ಚಂದ ಅಲಂಕಾರವುಂಟೆ?
ತನ್ನಂಗ ಸಂಗವ ನರಿಯದೆ ಲಿಂಗ ಸಂಗಿ ಯಾದೆನೆಂಬ, ಭಂಡರ ನಾನೇನೆಂಬೆನೆಂದಾತ ಅಂಬಿಗರ ಚೌಡಯ್ಯ. 

(11)
ಆಶೆಯುಳ್ಳಾತ ಒಬ್ಬ ರಾಧೀನದಲ್ಲಿಪ್ಪನು,
ಆಶೆಯ ಮನದ ಕೊನೆಯನರಿದಾತ ಕೈಲಾಸದಲ್ಲಿಪ್ಪನು,
ಎಂದಾತ ನಮ್ಮ ಅಂಬಿಗರ ಚೌಡಯ್ಯ.

(12)
ಆರಕ್ಯಾರು ಬಿತ್ತಿದ ಗಿಡದ ಹೂವನೇ ಕೊಯ್ದು,
ಊರಲ್ಲಿ ಕಟ್ಟಿದ ನೀರನೇ ತಂದು,
ನಾಡೆಲ್ಲ ನೋಡಲೆಂದು ಪೂಜಿಸುವ ಪುಣ್ಯವು,
ಆ ಹೂವಿಗೋ, ಆ ನೀರಿಗೋ,
ನಾಡೆಲ್ಲ ನೋಡಲೆಂದು ಪೂಜಿಸಿದಾತಗೋ?
ಇದು ನಾನರಿಯೆ, ನೀವೆ ಬಲ್ಲಡೆ ಹೇಳೆಂದಾತ ಅಂಬಿಗರ ಚೌಡಯ್ಯ.

(13)
ಈಶ್ವರನನ್ನು ಕಾಂಬುದೊಂದಾಶೆಯುಳ್ಳೊಡೆ, ಪರದೇಶಕ್ಕೆ ಹೋಗಿ ಬಳಲದಿರು,
ಕಾಶಿಯಲ್ಲಿ ಕಾಯುವ ವಿನಾಶವ ಮಾಡಬೇಡ,
ನಿನ್ನಲ್ಲಿ ನೀ ತಿಳಿದು ನೋಡಾ,
ಜಗವು ನಿನ್ನೊಳಗೆಂತಾದ ಅಂಬಿಗರ ಚೌಡಯ್ಯ.

(14)
ಈಶಲಾಂಛನವ ತೊಟ್ಟು ವೇಷಲಾಂಛನ ತೊಡಲೇತಕ್ಕೆ?
ಇದು ನಿಮ್ಮ ನಡೆ - ನುಡಿಗೆ ನಾಚಿಕೆಯಲ್ಲವೇ ? 
ಅಂದಣ ಛತ್ರಾಭರಣ ಕರಿ - ತುರಗಗಳ ಗೊಂದವೇತಕೆ?
ಅದು ಘನಲಿಂಗವ ಮೆಚ್ಚದೆಂದ ಅಂಬಿಗರ ಚೌಡಯ್ಯ.

(15)
ಎಲ್ಲವ ಕಳೆದುಳಿದ ಹೂವ ತಂದು,
ಗೆಲ್ಲ - ಸೋಲಕ್ಕೊಳಗಾದ ನೀರನೆ ತುಂಬಿ, ಕರಣಂಗಳೆಲ್ಲವು ಕಂಗಳು ತುಂಬಿ, ನಿಂದು ನೋಡಿ, ತನ್ನಂಗದಿಚ್ಚೆಯ ಮರೆದು ಲಿಂಗವ ಪೂಜಿಸಬೇಕೆಂದ ಅಂಬಿಗರ ಚೌಡಯ್ಯ.

(16)
ಎತ್ತ ಸುತ್ತಿ ಬಂದರೂ ಊರಿಗೆ ಬಪ್ಪದು, ತಪ್ಪದು , ಹಲವು ಮಾತಾಡಿದಡೇನು? ಮೂರು ಮಲವ - ಮರೆದಿರಬೇಕು,
ಹೋಲಬುದಪ್ಪಿದ ಮಗ ಬಲೆಯೊಳಗೆ ಬಿದ್ದಾಂತಾಗಬೇಡ,
ಇದನರಿದು ಬದುಕೆಂದ ಅಂಬಿಗರ ಚೌಡಯ್ಯ.

(17)
ಒಡಯದೆ ತೆಂಗಿನಕಾಯಿ ಮೆದ್ದವರುಂಟೇ?
ಕಾಯದ ಗುಣಕಿಳಿದಂತೆ ಅಂಗವನರಿದವರುಂಟೇ? ಜೋಡು ಹರಿದಲ್ಲದೆ ದೇಹ ಹರಿಯದು,
ಕೈಯಿಂದ ಅನ್ಯದೈವ ತಿಳಿವಲ್ಲದೆ ಗುಹೇಶ್ವರ ಅಂಗವನು ಅರಿಯದೆಂದಾತ ನಮ್ಮ ಅಂಬಿಗರ ಚೌಡಯ್ಯ.

(18)
ಓಂ ನಮಃ ಶಿವಾಯಃ
ಐಶ್ವರ್ಯ ದುಃಖದಲ್ಲಿ ಬೇಯುವ ಹೊಲೆ -
ಸಂಸಾರವನ್ನು ನಂಬದಿರು ಕೊಲೆಗೀಡಿಡದೆ,
ದಲೆ ಸತ್ಯ ಸದಾಚಾರದಲ್ಲಿ ನುಡಿ,
ಸಟಿಯನೆ ಬಿಡು, ದಿಟವನೆ ಹಿಡಿ,
ಈ ಘಟವುಳ್ಳನಕ ಕಾಲದಲ್ಲಿ ಶಿವಭಕ್ತಿಯ ನಟಿಸಿ - 
ನಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ.

(19)
ಓದಿ ಬೋಧಿಸಿ ಇವರಂಗೆ ಹೇಳುವನ್ನಬರ - ಚದುರಶೆಯಲ್ಲವೇ?,
ತಾ ತನ್ನ ನರಿದಲ್ಲಿ ಅರಿಕೆ, ಎದುರಿಗೆ ತೋರಿದಲ್ಲಿ 
ಅದೇ ದೇವತ್ವವೆಂದ ಅಂಬಿಗರ ಚೌಡಯ್ಯ.

(20)
ಕಟ್ಟಿದ ಲಿಂಗವನು ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗಿ, ಹೊಟ್ಟಿಡಿ ಬೀಳುವ ಖೊಟ್ಟಿ ಮೂಳರ ಕಂಡಡೆ,
ಮೆಟ್ಟಿದ್ದ ಎಡ ಪಾದರಕ್ಷೆಯ ತಗೊಂಡು,
ಲಟಲಟನೆ ಹೊಡೆಯೆಂದಾತ ಅಂಬಿಗರ ಚೌಡಯ್ಯ.

(21)
ಕುಡಿಯುವ ನೀರನಬಹುದೇ ನೀರಲದ್ದುವಾಗ? ಅಡುವ ಕಿಚ್ಚೆನ್ನ ಬಹುದೇ ಮನೆಯ ಸುಡುವಾಗ? ಒಡಲು ತನ್ನ ದೆನ್ನ ಬಹುದೇ ಪುಣ್ಯ ಪಾಪವನುಂಬಾಗ? ಜೀವ ತನ್ನ ದೆನ್ನ ಬಹುದೇ ಮಿಕ್ಕು ಹೋದಾಗ? ಇವನೊಡೆ ಬಡೆದು ಕಳೆ ಎಂದಾತ ಅಂಬಿಗರ ಚೌಡಯ್ಯ.

(22)
ಕಲಿತು ಹೇಳೆನೆಂದು ಕಾಣಬೇಕಾದರೆ, ಅರಿತ್ತಿದ್ದೆ ಅರಿವು, 
ಹಿರಿಯತನಬೇಡ ಅರಿದೆ ಮರೆದೆ ಎಂಬ, ಸಂದೇಹವನ್ನು ಭೇದ ದರ್ಪಣದಲ್ಲಿ ತೋರುವಾತನು, ಪ್ರತಿಬಿಂಬದಂತೆ ಅವನು ನಿಷ್ಠೆಯಾಗಿ ನಿಶ್ಚಯಿಸಿ, ಬೇರೊಂದಪ್ಪು ವದಿಲ್ಲವೆಂದಾತ ಅಂಬಿಗರ ಚೌಡಯ್ಯ.

(23)
ಕುಲ ಹೀನ ಶಿಷ್ಯಂಗೆ ಅನುಗ್ರಹ ಮಾಡಿ,
ತಿರುಗಿ ಅವನ ಮನೆಯಲ್ಲಿ ಉಣಬಾರದೆಂದು
ಅಕ್ಕಿ - ಕಣಕವ ತಕ್ಕೊಂಡು ಹೋಗುವ ಗುರುವಿನ ಕಂಡರೆ,
ಕೆಡಹಿ ಹಾಕಿ ಮೂಗನೇ ಕೊಯ್ದು ಇಟ್ಟಂಗಿಯ ಕಲ್ಲಿಲೆತಿಕ್ಕಿ , 
ಸಾಸಿವೆ ಹಿಟ್ಟಿನ ತಳಿದು ಮೇಲೆ ಲಿಂಬೆಯ ಹುಳಿ ಹಿಂಡಿ, 
ಪಡುವಣಗಾಳಿಗೆ ಹಿಡಿ ಎಂದಾತ ಅಂಬಿಗರ ಚೌಡಯ್ಯ.  

(24)
ಕ್ರಿಯೆಯರಿದವಂಗೆ ಗುರುವಿಲ್ಲ,
ಆಚಾರವನರಿದವಂಗೆ ಲಿಂಗವಿಲ್ಲ,
ಉತ್ಪತ್ತಿ - ಸ್ಥಿತಿ - ಲಯವನರಿದವಂಗೆ ಜಂಗಮವಿಲ್ಲ, ಪರಬ್ರಹ್ಮರ ನರಿದವಂಗೆ ಸರ್ವೇಂದ್ರಿಯವಿಲ್ಲ,
ತನ್ನ ನರಿದವಂಗೆ ಹಿಂದೆ ಮುಂದೆ ಕಾಂಬುವದೊಂದೂ -
ಇಲ್ಲವೆಂದ ಅಂಬಿಗರ ಚೌಡಯ್ಯ . 

(25)
ಕಷ್ಟನ ಮನೆಯಲ್ಲಿ ಸೃಷ್ಟಿಗೀಶ್ವರ ಎಂಬಾಗ,
ಎತ್ತ ಹೋದವು ನಿಮ್ಮ ಶಾಸ್ತ್ರಗಳು?
ಕೆತ್ತೆ ಮುಚ್ಚಳು ಬೇಡಂಗಚ್ಚರಿದೆವಾಗ
ಇಕ್ಕಿದ ಜನಿವಾರ ಬೇಡಾದವು,
ಮುಕ್ಕುಳಿಸಿದ ನೀರ ತಂದೆರೆದಡೆ,
ಇತ್ತಲಿದ್ದೇವೆಂದವೇ ವೇದಗಳು?
ವೇದದ ದುಃಖ ಬೇಡೆಂದಾತ ಅಂಬಿಗರ ಚೌಡಯ್ಯ.

(26)
ಕೈ ಮುಟ್ಟುವಲ್ಲಿ, ಕಿವಿ ಕೇಳುವಲ್ಲಿ, ವಾಯುಕೊಂಬಲ್ಲಿ, ಮೂಗು ಮೂಸಿಸುವಲ್ಲಿ, ಕಣ್ಣು ನೋಡುವಲ್ಲಿ,
ಬಾಯಿ ಕೋಂಬಲ್ಲಿ, ಇಂತೀ ಐವರ ಮಾಟವನು ವಿಚಾರಿಸದೆ,
ಸಂಚಿತ ಪ್ರಾರಬ್ಧ ಆಗಾಮಿಯೆಂಬ, ಹಿಂಚು ಮುಂಚಿಗೆ - ಸಿಕ್ಕದೆ ಕಡು ಬೆಳಗಿನ ಮಿಂಚು ಸುಚರದಂತೆ, ಇರಬೇಕೆಂದಾತ ಅಂಬಿಗರ ಚೌಡಯ್ಯ.

(27)
ಗಾಳಿ ಬಿಟ್ಟಲ್ಲಿ ತೂರಿಕೊಳ್ಳಿರಯ್ಯ,
ಗಾಳಿ ನಿನ್ನಾಧೀನ ವಲ್ಲಯ್ಯ,
ನಾಳೆ ತೂರಿದ ನೆಂದಡೆ ಇಲ್ಲಯ್ಯ,
ಶಿವಶರಣ ಎಂಬುದೊಂದೇ ಗಾಳಿ ಬಿಟ್ಟಲ್ಲಿ,
ಬೇಗ ತೂರೆಂದ ಅಂಬಿಗರ ಚೌಡಯ್ಯ.

(28)
ಗಿಳಿಯಿಲ್ಲದ ಪಂಜರ ಹಲವು ಮಾತಾಡಬಲ್ಲುದೆ, ದೇವರಿಲ್ಲದ ದೇಗುಲಕ್ಕೆ ಮಂತ್ರಾಭಿಷೇಕವುಂಟೇ?
ಅವು ನಷ್ಟವಾಗಿ ಕುರುಹಿನರಿವಿನಂತೆ ನಾನರಿಯೆನೆಂದಾತ ಅಂಬಿಗರ ಚೌಡಯ್ಯ.

(29)
ಗುರುವೆಂದೆಂಬೆನೆ ಹಲವರ ಮಗ,
ಲಿಂಗವೆಂದೆಂಬೆನೆ ಕಲ್ಲುಕುಟಿಗರ ಮಗ, ಪ್ರಸಾದವೆಂದೆಂಬೆನೆ ದೇವೇಂದ್ರನ ಮಗ,
ಈ ಸಂಹಿಡಿಯಲಿಲ್ಲ, ಬಿಡಲಿಲ್ಲ -
ತನ್ನೊಳಗೆ ತಾನು ತಿಳಿದು ನೋಡೆಂದ -
ಅಂಬಿಗರ ಚೌಡಯ್ಯ,

(30)
ತುಪ್ಪದಲ್ಲಿ ಬೆಂದರೇನು, ಸಪ್ಪೆಯಾಗಿ ತೋರಿತು,
ಅರಿವು ಉಳ್ಳವನೆಂದು ಕುರುಹಿನ ಬೆಂಬಳಿಯಲ್ಲಿ - ಅಡಗಿದರೆ, ಅರುಹು - ಕುರುಹು ನಿಷ್ಫಲ,
ಆರನೂ ಕೇಡ ನುಡಿಯಬೇಡ ಎಂದಾತ ಅಂಬಿಗರ ಚೌಡಯ್ಯ 

(31)
ತಟಾಕ ಒಡೆದರೆ ಕಟ್ಟುವದಲ್ಲದೆ ಅಂಬುಧಿತುಂಬಿ, ಮೇರೆದಪ್ಪಿದರೆ ತಟ್ಟಂಗೆ ನಿಂತದ್ದುಂಟೇ? ಅರಿಯದವನಿಗೆ ಬೇರೊಂದು ಹೇಳೆನೆಂದರೆ,
ಅರಿಕೆಯ ಹೇಳಿದರೆ ಅರಿವನಲ್ಲದೆ,
ಅರಿವು ಮರೆದವರಿಗೆ, ಬೇರೊಂದು ಹೇಳೆನೆಂದರೆ - ಕಡೆಮೊದಲಿಲ್ಲವೆಂದಾತ ಅಂಬಿಗರ ಚೌಡಯ್ಯ.

(32)
ತನ್ನವ ಹುಸಿಮಾಡಿ ಇನ್ನೊಂದು ದಿಟಮಾಡುವ, ಅಣ್ಣರಿಗೆ ನಂಬುಗೆ ಇನ್ನಾವುದಯ್ಯಾ?
ತನ್ನೊಳಗಿರ್ದ ಘನವ ತಾ ತಿಳಿಯಲರಿಯದೆ, ಪರಬ್ರಹ್ಮಕ್ಕೆ ತಲೆಯಿಕ್ಕಿ ತೆಗೆದನೆಂಬ - 
ಅಣ್ಣ ಗಾವಿಲನೆಂದ ಅಂಬಿಗರ ಚೌಡಯ್ಯ.

(33)
ದೇಹಾರವ ಮಾಡುವ ಅಣ್ಣಗಳಿರಾ,
ಒಂದು ತುತ್ತು ಆಹಾರವನಿಕ್ಕಿರಯ್ಯ,
ದೇಹಾರಕ್ಕೆ ಆಹಾರವೇ ನಿಚ್ಚಣಿಗೆ,
ದೇಹಾರ ಮಾಡುತ್ತ ಆಹಾರವನಿಕ್ಕದಿರ್ದೊಡೆ, ಆಹಾರವಿಲ್ಲೆಂದ ಅಂಬಿಗರ ಚೌಡಯ್ಯ.

(34)
ನಿಜಗಂಡವ ಸಂಗವನೊಲ್ಲದೆ ಭುಜಗರ ಸಂಗಮಾಡುವ,
ಬಾಜೀರಿ ತೊತ್ತಿಗೆ ಎಲ್ಲಿದೆ ನಿಜಮುತ್ತೈದೆತನ? 
ತ್ರಿಜಗ ವಂದಿತ ಲಿಂಗವ ಕರ - ಕಮಲದಲ್ಲಿ ಹಿಡಿದುಕೊಂಡು,
ಮತ್ತೆ ಅನ್ಯ ದೈವಕ್ಕೆರಗಿದರೆ -
ನಾಯ - ನರಕವೆಂದಾತ ನಮ್ಮ ಧಿಟ್ಟಾಧಿಧಿಟ್ಟ, ವೀರಾಧಿವೀರ ಅಂಬಿಗರ ಚೌಡಯ್ಯ.

(35)
ನಾರಿವಾಳದ ಕಾಯಿ ನಾಯಿ ಹಾಕಿದರೆ -
ಅದರಂದವನೆತ್ತ ಬಲ್ಲುದೋ? 
ಜಂಗಮದೊಳಗೆ ಲಿಂಗವನರಿಯದವ,
ಭಂಗಿಯ - ತಿಂದಂತೆ, ತನ್ನ ಹೊಂದಿದಾತ್ಮವ -
ತಾನು ತಿಳಿಯದಿದ್ದರೆ,
ತೆಂಗತಿಂದ ನಾಯಂದಾತ ನಮ್ಮ ಅಂಬಿಗರ ಚೌಡಯ್ಯ. 

ಬ್ರಹ್ಮದ ಮಾತನಾಡಿ ಕನ್ಯೆಯರ ಕಾಲದೆಸೆಯಲ್ಲಿ ಕುಳಿತಲ್ಲಿ ಪರಬೊಮ್ಯದ ಮಾತು ಅಲ್ಲಿ ನಿಂದಿತೆಂದ ನಮ್ಮ ಅಂಬಿಗರ ಚೌಡಯ್ಯ.

(36)
ಬೇಡಂಗೆ, ಜೇಡಂಗೆ, ಡೋಹರಂಗೆ, ಹೊಲೆಯಂಗೆ, ರೂಢಿಗೀಶ್ವರನೊಲಿದ ಪರಿಯ ನೋಡಾ, 
ಲೋಕದ ಮಾನವರುಡ ಮಾಡುವರು ಸಮಯಂಗಳಂ,
ಮಾಡಲಿಕ್ಕೆ ಆದರೇನು ಸ್ವತಂತ್ರವೇ? 
ಇವರೊಡಿದ ಠಾವಿನಲ್ಲಿ ಕಲ್ಲು - ಮುಳ್ಳು ಮೂಡುವದೆಂದಾತ,
ನಮ್ಮ ಅಂಬಿಗರ ಚೌಡಯ್ಯ.

(37)
ಬೆಲ್ಲಕ್ಕೆ ಚದುರ ರಸವಲ್ಲದೆ ಸಿಹಿಗೆ ಚದುರ ರಸವುಂಟೆ? ಕುರುಹಿಗೆ ಪೂಜೆಯಲ್ಲದೆ ಅರುಹಿಗೆ ಪೂಜೆಯುಂಟೆ? ಅರಿವು ಕರಿಗೊಂಡಲೀಕಯ್ಯಾ, ಕುರುಹು, ಅಲ್ಲಿ, ಲೋಪವೆಂದ ಅಂಬಿಗರ ಚೌಡಯ್ಯ.

(38)
ಅಡವಿಯೊಳಗರಸುವಡೆ, ಸಿಡಿಗಂಟಿ ತಾನಲ್ಲ, ಮಡುವಿನೊಳಗರಸುವಡೆ, ಮತ್ಸ್ಯಮಂಡೂಕನಲ್ಲ, ಒಡಲ ದಂಡಿಸುವಡೆ, ಕೊಡುವ ಸಾಲಿಗನಲ್ಲ,
ಅಷ್ಟ ತನುವಿನೊಳಗೆ ಹುದುಗಿರ್ಪ ಲಿಂಗವ 
ನಿಲುಕಿ ನೋಡಿಯೇ ಕಂಡನಂಬಿಗರ ಚೌಡಯ್ಯ.

(39)
ಮಾಡುವ ಭಕ್ತಂಗೆ ಮನವೇ ಸಾಕ್ಷಿ, 
ಹೊರಹೊಮ್ಮಿ ಬಯಲ ಹೊರಲೇಕೆ? 
ಹಮ್ಮಿಲ್ಲದೆ ಮಾಡಿ ಮನದಲ್ಲಿ ಮರುಗದಿರ್ದಡೆ,
ಅಲ್ಲಿ ತಾಹೆರ ಹಿಂಗದಿರ್ಪನಂಬಿಗರ ಚೌಡಯ್ಯ.

(40)
ಮೂರವ ಮುಟ್ಟದೆ, ನಾಲ್ಕವ ನಂಬದೆ, 
ಐವರ ನೆಚ್ಚಲು ಬೇಡ ಕಂಡ್ಯಾ,
ಆರುವ ಜಾರದೆ, ಏಳುವ ಹಿಡಿಯದೆ, 
ಎಂಡುವ ಗಂಟಿಕ್ಕ ಬೇಡ ಕಂಡ್ಯಾ, 
ಒಂಭತ್ತು ಬಾಗಿಲು ಹಿಂದಕ್ಕೆ ಹೋದರೆ, 
ಅಂಬಿಗರ ಚೌಡಯ್ಯನ ಉಪದೇಶವಯ್ಯ.

(41)
ಮೋಹ ಗೂಢದಲ್ಲಿ ಇರಬಲ್ಲುದೆ? 
ಮುದ್ರೆಯ ಪಶು ಪ್ರಾಣಲಿಂಗಿಯಾಗಬಲ್ಲವೇ? 
ಡಾಗಿನ ಪಶುಗಳೆಲ್ಲ ಭೇದವನರಿಯಬಲ್ಲವೇ? ಎಂದಾತನು ನಮ್ಮ ಅಂಬಿಗರ ಚೌಡಯ್ಯ.

(42)
ಮಾತುಗಂಟಿತನದಿಂದ ಎಷ್ಟು ಮಾತಾಡಿದರೇನು? ಕಾಮಿನಿಯರ ಕಾಲದೆಶೆಯಲ್ಲಿ ಸಿಲುಕಿ,
ಕ್ರೋಧವ ದಳ್ಳುರಿಯಲ್ಲಿ ಬೆಂದು,
ಆಶೆ ಎಂಬ ಪಾಶ ಕೊರಳಲ್ಲಿ ಸುತ್ತಿ
ಅದೇಕೋ ಅದೇತರ ಮಾತೆಂದ ಅಂಬಿಗರ ಚೌಡಯ್ಯ. 

(43)
ರತಿಯಿಂದ ರತ್ನ, ಗತಿಯಿಂದ ವಾದ್ಯ, 
ಸದ್ಗತಿಯಿಂದ ಮುಕ್ತಿ, ನಿರ್ಗತಿಯಿಂದ ವಿರಕ್ತಿ,
ಈ ನಾಲ್ಕರ ಮಿತಿಯು ತಿಳಿಯಬೇಕೆಂದ
ನಮ್ಮ ಅಂಬಿಗರ ಚೌಡಯ್ಯ.

(44)
ವ್ರತವೆಂಬುದೇ ಪ್ರಾಣ, ಘಟವೆಂಬುದೇ ಕಟ್ಟು, ಪ್ರಾಣವಿಲ್ಲದೇ ಘಟ ಜ್ಞಾನವಿಲ್ಲದೇ,
ಕ್ರಿಯಕ್ಕೂ ಈ ಉಭಯಕ್ಕೂ ನಾನಾರೆಂಬುದನರಿಯ ಬೇಕೆಂದಾತ ನಮ್ಮ ಅಂಬಿಗರ ಚೌಡಯ್ಯ.

(45)
ಸಕಲ ಭೋಗವಿಲಾಸ ಲಿಂಗಕ್ಕೆಂದಲ್ಲಿ,
ತನ್ನಂಗಕ್ಕೆ ಶೃಂಗಾರವುಂಟೇ?
ಶ್ರೀ ರುದ್ರಾಕ್ಷಿ, ವಿಭೂತಿ, ಸ್ವಸ್ಥಾನದಲ್ಲಿ, 
ತನ್ನಂಗಕ್ಕೆ ಶೃಂಗಾರವೆಂದು ಮಾಡಿದರೆ,
ಆ ನಿಜಪದದಂಗ ಒಂದೂ ಇಲ್ಲೆಂದ,
ನಮ್ಮ ಅಂಬಿಗರ ಚೌಡಯ್ಯ.

(46)
ಹಾಡಿ ಮಾಡುವ ಹರಕಿಯ ಕೇಳು,
ಕೂಡಿ ಮಾಡುವ ಕುದುರೆಯ ಕೇಳು,
ಹಾಡಿಮಾಡಿ ಕೂಡಿಮಾಡಿ ಬದುಕಿಗೆ - ಕೇಡುತಂದುಕೊಳ್ಳಲೇತಕೋ ತನ್ನ,
ಬಿಡಲಿಕ್ಕೆ ಬಂದ ಗುರು - ಲಿಂಗ - ಜಂಗಮರ ಇರವನರಿತು, ನೀಡ ಕಲಿತರೆ ರೂಢಿಯೊಳಗೆ - 
ಆತನೇ ಜಾಣ, ಎಂದಾತ ಅಂಬಿಗರ ಚೌಡಯ್ಯ.

(47)
ವೇದದ ಲುಳ್ಕೊಡೆ ಪ್ರಾಣವಧೆಯಪ್ಪುದೆ?
ಶಾಸ್ತ್ರವ ಲುಳ್ಕೊಡೆ ಸಮವಾಗದಿಪ್ಪುದೆ?
ಪರ್ವತದ ಲುಳ್ಕೊಡೆ ಹೋದವರು ಮರಳಿ ಬಪ್ಪರೆ? ನಿರ್ಬುದ್ದಿ ಮಾನವರನೇನೆಂಬೆ?
ಮನ - ವಚನ - ಕಾಯ ಶುದ್ದವಾಗಿಪ್ಪಾತನ ಹೃದಯದಲ್ಲಿ,
ನಿಮ್ಮ ಕಂಡೆನೆಂದಾತ ನಮ್ಮ ಅಂಬಿಗರ ಚೌಡಯ್ಯ.

(48)
ಲಿಂಗ ತನುವಿಂಗೆ ಶೃಂಗಾರವಪ್ಪ ತೆರೆನೆಂತೆಂದೊಡೆ, ಕಾಮ, ಕ್ರೋಧ, ಲೋಭ, ಮೋಹಾದಿಗಳಲ್ಲಿ, ತೆರವುಗೊಡದಿಪ್ಪುದು, ಲಿಂಗವೇ ಅಂಗವಾಗಿ ಧ್ಯಾನ, ಧಾರಣ ನಿಜನಿವಾಸವಾಗಿ, ನಿಶ್ಚಯ ನಿಜ ತತ್ವವಾಗಿ ನಿಂದುವೇ ಆಭರಣವೆಂದ ನಮ್ಮ ಅಂಬಿಗರ ಚೌಡಯ್ಯ.

(49)
ಅಡವಿಯ ಹೊಗಸಿತ್ತು, ನೀರಲದ್ದಿತ್ತು,
ಜಡೆಗಟ್ಟಿ ಭಸ್ಮವ ತೊಡೆಸಿತ್ತು,
ಹಿಡಿದೆತ್ತಿ ಕೇಶವ ಕೀಳಿಸಿತ್ತು, ಹುಡಿ ಹುಚ್ಚು ಗೊಳಿಸಿತ್ತು, ಊರೊಳಗೆಲ್ಲ ಬೆಡಗಿನ ಮಾಯೆಗೆ ನಾಚುವನೆಂದ ಅಂಬಿಗರ ಚೌಡಯ್ಯ.

(50)
ತನ್ನ ಮರೆದು ದೇವರ ಕಂಡಿಹೆನೆಂದೆಂಬರು
ತನ್ನವ ಮರೆದು ದೇವರ ಕಂಡಿಹೆನೆಂದೆಂಬ ಕಾರಣ ಹರಿಸುರ ಬ್ರಹ್ಮಾದಿಗಳೆಲ್ಲರೂ ತಲೆಕೆಳಗಾಗಿ ಹೋದರು ಆ ದೇವರ ಮರೆದು - ತನ್ನವನರಿದರೆ
ತಾವೇ ನಿಜವೆಂದನಂಬಿಗ ಚೌಡಯ್ಯ

(51)
ದೊಡ್ಡ - ದೊಡ್ಡ ಚಿಂದಿಯ ಶೆಟ್ಟಿಗಳ ಕಂಡು,
ಅಡ್ಡ ಗಟ್ಟಿ ಹೋಗಿ ಶರಣಾರ್ಥಿ ಎಂಬರು,
ಎತ್ತುಗಳ ತನಕ ದುಡ್ಡುಗಳ ಬೇಡುತ್ತ,
ನಮ್ಮ ಮಠಕ್ಕೆ ಬರ್ರಿ ಹಿರಿಯರೇ ಎಂಬರು,
ಹೋಗಿ ಶರಣಾರ್ಥಿ ಭಕ್ತನೆಂದೊಡೆ,
ಕೇಳದೆ ಹಾಗೆ ಅಡ್ಡ ಮೋರೆಯನ್ನಿಕ್ಕಿಕೊಂಡು -
ಸುಮ್ಮನೆ ಹೋಗುವ ಹೆಡ್ಡ ಮೂಳರಿಗೆ ದುಡ್ಡೇ ಪ್ರಾಣವಾಯಿತ್ತು -
ದುಡಿಸ್ತರ ಕುರುಹನರಿಯದೆ ಮೊಳಪಾದದ ಮೇಲೆ - ಹೊಡಕೊಂಡು ನಗುತಿರ್ದಾತ,
ನಮ್ಮ ಅಂಬಿಗರ ಚೌಡಯ್ಯ.