ಹಂಪಿ ಉತ್ಸವವನ್ನು ಏಕೆ ಆಚರಿಸುತ್ತಾರೆ? History Of Hampi Ustav

ಹಂಪಿ ಉತ್ಸವವನ್ನು ಏಕೆ ಆಚರಿಸುತ್ತಾರೆ?
History Of Hampi Ustav

  • ಹಂಪಿ ಉತ್ಸವವನ್ನು ವಿಜಯ ಉತ್ಸವ ಎಂದು ಕೂಡಾ ಕರೆಯುತ್ತಾರೆ. 
  • ಹಂಪಿ ಉತ್ಸವ ಕರ್ನಾಟಕ ಸರ್ಕಾರದ ನೇತೃತ್ವದಲ್ಲಿ ನಡೆಯುವುದು.
  • 'ಕರ್ನಾಟಕ ವೈಭವ (The Glory Of Karnataka)' ಎನ್ನುವ ಥೀಮ್ ಇಟ್ಟುಕೊಂಡು ಕರ್ನಾಟಕ ಸರ್ಕಾರ ಪ್ರತೀ ವರ್ಷ ಈ ಹಂಪಿ ಉತ್ಸವವನ್ನು ಆಚರಿಸುತ್ತಿದೆ.

ಹಂಪಿ ಉತ್ಸವದ ಚರಿತ್ರೆ:

  • ವಿಜಯ ನಗರ ಸಾಮ್ರಾಜ್ಯದ ರಾಜದಾನಿ ಹಂಪಿ.ವಿಜಯ ನಗರ ರಾಜರು ಹಂಪಿಯಲ್ಲಿ ದಸರಾ ಉತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದರು.
  • ಹಂಪಿಯಲ್ಲಿ ಆಚರಿಸುತ್ತಿದ್ದ ದೊಡ್ಡ ಉತ್ಸವ ದಸರ.
  • ಹಂಪಿಯಲ್ಲಿರುವ ಮಹಾನವಮಿ ದಿಬ್ಬ ಮತ್ತು ವಿಜಯ ವಿಠಲ ದೇವಾಲಯಗಳು ಈ ಮಹೋತ್ಸವದ ಕೇಂದ್ರಗಳಾಗಿದ್ದವು.
  • ತಮ್ಮ ಸಾಮ್ರಾಜ್ಯದ ಶಕ್ತಿ-ಸಾಮಥ್ರ್ಯ, ಸಂಪತ್ತು-ಸಮೃದ್ಧಿ, ವೈಭವ-ವೈಭೋಗ, ವೀರತ್ವ-ಧೀರತ್ವ, ಕಲೆ-ಸಾಹಿತ್ಯ, ಸಂಗೀತ-ನೃತ್ಯ, ಸಂಸ್ಕೃತಿ-ಸಂಪನ್ನತೆ .... ಹೀಗೆ ಸಕಲ ವಿಧಗಳಲ್ಲೂ ತಮ್ಮ ಹಿರಿಮೆ-ಗರಿಮೆಗಳನ್ನು ತೋರ್ಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ, ಬಹುಮುಖ್ಯವಾಗಿ ವಿಜಯದ ದ್ಯೋತಕವಾಗಿ ವಿಜಯದಶಮಿಯ ಈ ದಸರಾ ಮಹೋತ್ಸವವನ್ನು ವಿಜಯನಗರ ಅರಸರು ಆಚರಿಸುತ್ತಿದ್ದರು.
  • ಈ ಉತ್ಸವವನ್ನು ವೀಕ್ಷಿಸಲು ದೇಶ-ವಿದೇಶಗಳ ಗಣ್ಯಾತಿಗಣ್ಯರು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ ದಾಖಲೆಗಳುಂಟು.
  • 11ನೇ ಶತಮಾನದಲ್ಲೇ ಇಲ್ಲಿಗೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿಗರಾದ ಅಲ್ಬೆರೋನಿ, 15-16ನೇ ಶತಮಾನದಲ್ಲಿ ಬಂದಿದ್ದ ಪರ್ಷಿಯಾದ ಅಬ್ದುಲ್ ರಜಾಕ್, ಇಟಲಿಯ ನಿಕೋಲಕೊಂಟಿ, ಪೋರ್ಚುಗೀಸಿನ ಡೊಮಿಂಗೋಪಾಯಸ್ (1520-1522) ಮೊದಲಾದವರು ವಿಜಯನಗರ ಸಾಮ್ರಾಜ್ಯದ ವೈಭವೋಪೇತವಾದ ಈ ಮಹೋತ್ಸವವನ್ನು ಕೊಂಡಾಡಿ ತಮ್ಮ ಪ್ರವಾಸ ಕಥನಗಳಲ್ಲಿ ದಾಖಲಿಸಿದ್ದಾರೆ.
  • 1565 ರ ತಳ್ಳಿಕೋಟ ಯುದ್ದದಲ್ಲಿ ವಿಜಯನಗರ ಸಾಮ್ರಾಜ್ಯ ಪತನ ಹೊಂದಿದ ನಂತರ, ಮುಸ್ಲೀಂ ಆಡಳಿತಗಾರರ ಅಡಿಯಲ್ಲಿ ಈ ದಸರ ಉತ್ಸವ ಆಚರಣೆ ಕೊನೆಗೊಂಡಿತು.
  • ಪುನಃ 1610 ರಲ್ಲಿ ಮೈಸೂರು ರಾಜ ಒಡೆಯರ್-1 ಶ್ರೀರಂಗಪಟ್ಟಣದಲ್ಲಿ ಈ ದಸರ ಉತ್ಸವವನ್ನು ಆರಂಭಿಸಿದನು.
  • ಅಂದಿನಿಂದ ಮೈಸೂರು ಒಡೆಯರ್ಗಳು ದಸರ ಉತ್ಸವದ ಆಚರಣೆಯನ್ನು ಮುಂದುವರೆಸಿದರು.

ಹಂಪಿ ಉತ್ಸವ ಆಚರಿಸುವುದರ ಹಿಂದಿರುವ ಉದ್ದೇಶಗಳು:

  • ವಿಜಯನಗರ ರಾಜರ ಆಳ್ವಿಕೆಯಲ್ಲಿ ಸ್ವರ್ಣ ನಗರವಾಗಿ ಹೆಸರುವಾಸಿ ಆದ ಹಂಪಿಯ ವೈಭವವನ್ನು ನೆನಪು ಮಾಡಿಕೊಳ್ಳುತ್ತಾ, ವಿಜಯನಗರ ಸಾಮ್ರಾಜ್ಯದ ವೈಭವ ಹೇಗಿತ್ತೋ ಇಂದಿನ ಪೀಳಿಗೆಗೆ ಪರಿಚಯಿಸುತ್ತಾ, ರಾಜರು ದಸರ ಉತ್ಸವವನ್ನು ಆಚರಿಸುತ್ತಿದ್ದ ವಿಧವಾಗಿ ಹಂಪಿ ಉತ್ಸವ ಆಚರಿಸಲು ಕರ್ನಾಟಕ ಸರ್ಕಾರ ನಿರ್ದಾರ ಮಾಡಿರುವುದರಿಂದ ಹಂಪಿ ಉತ್ಸವ ಆಚರಿಸಲಾಗುತ್ತದೆ.
  • ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು (Tourists) ಆಕರ್ಷಿಸಲು.
  • ನಮ್ಮ ಕಲೆ, ಸಂಸ್ಕೃತಿ, ಸಂಪ್ರದಾಯಗಳನ್ನು ಕಾಪಾಡಿಕೊಳ್ಳಲು.
  • ನಾಡಿನ ಘನ ಚರಿತ್ರೆಯನ್ನು ಪ್ರಪಂಚಕ್ಕೆ ಪರಿಚಯಿಸಲು ಹಂಪಿ ಉತ್ಸವವನ್ನು ಪ್ರತೀ ವರ್ಷ ಆಚರಿಸಲಾಗುತ್ತದೆ.

ಹಂಪಿ ಉತ್ಸವ ಆಚರಣೆ:

  • ಮೊದಲ ಹಂಪಿ ಉತ್ಸವ 1970 ರಲ್ಲಿ ಹಂಪಿಯ ಕಮಲ ಮಯಲ್ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕವೈಭವ ಸಾರುವ ಪ್ರಯತ್ನ ನಡೆಸಲಾಗಿತ್ತು.
  • ನಂತರ ಇದು ಮುಂದುವರೆಯಲಿಲ್ಲ.
  • ಹಂಪಿ ಉತ್ಸವವನ್ನು ಆಚರಣೆಗೆ ತರಲು ಬಳ್ಳಾರಿ ಜಿಲ್ಲೆಯವರಾದ ಹಿರಿಯ ರಾಜಕಾರಿಣಿ M.P.ಪ್ರಕಾಶ್ ಅವರ ಕೃಷಿ ಮಹತ್ವವಾದದ್ದು.
  • ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ದಿವಂಗತ M.P.ಪ್ರಕಾಶ್ ಅವರು ಪ್ರವಾಸಿ ಉತ್ಸವದ ಮುಂದುವರಿಕೆ ಎನ್ನುವಂತೇ...1987 ರಲ್ಲಿ ಕನಕ-ಪುರಂದರ ಉತ್ಸವವಾಗಿ ಇದು ಆಚರಿಸಲ್ಪಟ್ಟಿತು.
  • ರಾಜ್ಯದ ಗಂಭೀರ ಪ್ರಯತ್ನದ ಫಲವಾಗಿ ಇದೇ ಉತ್ಸವ ಹಂಪಿ ಉತ್ಸವವಾಗಿ ಕರೆಯಲ್ಪಟ್ಟಿತು.
  • M.P.ಪ್ರಕಾಶ್ ಅವರು ಪ್ರವಾಸೋದ್ಯಮ ಸಚಿವರಾಗಿದ್ದಾಗ 'ವಿಜಯನಗರ ವೈಭವ ದರ್ಶನ' ಎಂಬ ಹೆಸರಿನಲ್ಲಿ 1988 ಅಕ್ಟೋಬರ್ 24 ರಿಂದ 26 ರವರೆಗೆ 3 ದಿನಗಳ ಕಾಲ ಹಂಪಿ ಉತ್ಸವ ಹಮ್ಮಿಕೊಂಡಿತ್ತು.
  • ಆದರೆ,ಅಂದಿನ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಅಬ್ದುಲ್ ನಜೀರ್ ಸಾಬ್ ಅವರ ನಿಧನದಿಂದಾಗಿ ಉತ್ಸವದ ಎಲ್ಲಾ ಕಾರ್ಯಕ್ರಮಗಳು ರದ್ದಾದವು.
  • ನಂತರ ವರ್ಷದಲ್ಲಿ ಆಡಳಿತಾ ರೂಢ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಉತ್ಸವ ನಡೆಯಲಿಲ್ಲ.
  • ಪುನಃ M.P.ಪ್ರಕಾಶ್ ಅವರು ಇದ್ದ ಸರ್ಕಾರ ಆಡಳಿತಕ್ಕೆ ಬಂದ ಮೇಲೆ 1995 ರಿಂದ 2000 ರವರೆಗೆ ನಿರಂತರವಾಗಿ ಹಂಪಿ ಉತ್ಸವ ಪ್ರತೀ ವರ್ಷ ನಡೆಯಿತು.
  • 2001 ರಲ್ಲಿ ಬಳ್ಳಾರಿ ಜಿಲ್ಲೆಗೆ ಬರಗಾಲ ಎದುರಾಗಿದ್ದರಿಂದ ಹಂಪಿ ಉತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.ಒಂದೇ ವೇದಿಕೆಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತ್ತು.
  • 2002 ರಲ್ಲಿಯೂ ಬರಗಾಲ ಮುಂದುವರೆದ ಕಾರಣ ಹಂಪಿ ಉತ್ಸವವನ್ನು ರದ್ದುಗೊಳಿಸಲಾಗಿತ್ತು.
  • 2003 ರಿಂದ 2008 ರವರೆಗೆ ಪ್ರತೀ ವರ್ಷ ನವಂಬರ್ 3 ರಿಂದ 5 ರವರೆಗೆ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
  • 2009 ರಲ್ಲಿ ಹಂಪಿ ಉತ್ಸವ ನಡೆಯಲಿಲ್ಲ.
  • ಶ್ರೀಕೃಷ್ಮದೇವರಾಯನ (1509-1529) 500ನೇ ಪಟ್ಟಾಭಿಷೇಕ ಮಹೋತ್ಸವದ ಸ್ಮರಣಾರ್ಥ 2010 ರಲ್ಲಿ ಜನವರಿ 27 ರಿಂದ 29 ರವರೆಗೆ ಹಂಪಿ ಉತ್ಸವ ಅದ್ದೂರಿಯಾಗಿ ನಡೆಸಲಾಯಿತು.
  • 2011 ರಲ್ಲಿ ಜನವರಿ 27 ರಿಂದ 29 ರವರೆಗೆ ಹಂಪಿ ಉತ್ಸವ ನಡೆಸಲಾಯಿತು.
  • 2012-2013 ರಲ್ಲಿ ಹಂಪಿ ಉತ್ಸವ ನಡೆಸುವುದಾಗಿ ಹೇಳುತ್ತಲೇ ಚುನಾವಣೆಯ ಘೋಷಣೆ ಆಗಿದ್ದರಿಂದ ಹಂಪಿ ಉತ್ಸವ ನಡೆಯಲೇ ಇಲ್ಲ.
  • 2014 ರಲ್ಲಿ ಜನವರಿ 10 ರಿಂದ 12 ರವರೆಗೆ ಹಂಪಿ ಉತ್ಸವ ನಡೆಸಲಾಯಿತು.
  • 2015 ರಲ್ಲಿ ಜನವರಿ 9 ರಿಂದ 11 ರವರೆಗೆ ಹಂಪಿ ಉತ್ಸವ ನಡೆಸಲಾಯಿತು.
  • 2016 ರಲ್ಲಿ ಜನವರಿ 9 ರಿಂದ 11 ರವರೆಗೆ ಹಂಪಿ ಉತ್ಸವ ನಡೆಸಲಾಯಿತು.
  • 2017 ರಲ್ಲಿ ನವಂಬರ್ 3 ರಿಂದ 5 ರವರೆಗೆ ಹಂಪಿ ಉತ್ಸವ ನಡೆಸಲಾಯಿತು.
  • ರಾಜ್ಯದ 100 ತಾಲೂಕುಗಳಲ್ಲಿ ಬರ ಇರುವುದರಿಂದ 2018 ರಲ್ಲಿ ಹಂಪಿ ಉತ್ಸವ ಆಚರಿಸಲಿಲ್ಲ.
  • 2019 ರಲ್ಲಿ ಮಾರ್ಚ್ 2 ರಿಂದ 3 ರವರೆಗೆ ಹಂಪಿ ಉತ್ಸವವನ್ನು ಆಚರಿಸಲಾಗಿದೆ.
  • 2020 ರಲ್ಲಿ జనవరి 10 రింద 11 ರವರೆಗೆ ಹಂಪಿ ಉತ್ಸವವನ್ನು ಆಚರಿಸಲಾಗಿದೆ.
  • 2021 ರಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಹಂಪಿ ಉತ್ಸವವನ್ನು ಆಚರಿಸಲಿಲ್ಲ.
  • 2022 ರಲ್ಲಿ జనవరి 13 రింద 15 ರವರೆಗೆ ಹಂಪಿ ಉತ್ಸವವನ್ನು ಆಚರಿಸಲಾಗಿದೆ.
  • 2023 ರಲ್ಲಿ జనవరి 27 రింద 29 ರವರೆಗೆ ಹಂಪಿ ಉತ್ಸವವನ್ನು ಆಚರಿಸಲಾಗಿದೆ.

ಹಂಪಿ ಉತ್ಸವದ ಕಾರ್ಯಕ್ರಮಗಳು ಮತ್ತು ಆಕರ್ಷಣೆಗಳು:

  • Arts and Crafts
  • Music
  • Decorations
  • Jumbo savari
  • Janapada kalavahini
  • Light and sound show

NOTE:

  • 1986 ರಲ್ಲಿ ಹಂಪಿಯನ್ನು UNESCO ಪ್ರಪಂಚ ಸಾಂಸ್ಕೃತಿಕ ಸ್ಥಳವಾಗಿ(world heritage site)ಗುರ್ತಿಸಿದೆ.
  • THE NEW YORK TIMES ಪ್ರಕಟಿಸಿದ 2019 ರಲ್ಲಿ ಪ್ರಪಂಚದಲ್ಲಿ ನೋಡಲೇ ಬೇಕಾದ 52 ಸ್ಥಳಗಳ ಪಟ್ಟಿಯಲ್ಲಿ ಹಂಪಿ 2ನೇ ಸ್ಥಾನ ಪಡೆದಿದೆ(ಮೊದಲನೇ ಸ್ಥಾನ Puerto Rico).
  • 2016-2017 ರಲ್ಲಿ 5.35 ಲಕ್ಷ ಪ್ರವಾಸಿಗರು ಹಂಪಿಯನ್ನು ವೀಕ್ಷಿಸಿದ್ದಾರೆ.ಇದರಲ್ಲಿ 38,182 ಮಂದಿ ವಿದೇಶಿ ಪ್ರವಾಸಿಗರಿದ್ದಾರೆ.

ಇದನ್ನು ಸಹ ನೋಡಿ: