ಇದನ್ನು PDF Format ನಲ್ಲಿ Download ಮಾಡಿಕೊಳ್ಳಲು ಇಲ್ಲಿ Click ಮಾಡಿ.
ವಿಶ್ವ ಮಾನವ ಸಂದೇಶ:
ಎಂದಿನಿಂದ ಆಚರಿಸಲಾಗುವುದು?
ಡಿಸೆಂಬರ್ 29 ರಂದೇ ಏಕೆ?
ವಿಶ್ವಮಾನವ ಗೀತೆ:
ಈ ದಿನದ ಕಾರ್ಯಕ್ರಮಗಳು:
ಕುವೆಂಪು ಅವರ ಬಗ್ಗೆ:
ಮುಖ್ಯ ಪ್ರಶಸ್ತಿಗಳು:
ವಿಶ್ವಮಾನವ ದಿನಾಚರಣೆ |
ವಿಶ್ವಮಾನವ ದಿನಾಚರಣೆ
ಡಿಸೆಂಬರ್ 29
ವಿಶ್ವ ಮಾನವ ಸಂದೇಶ:
- ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ! ಆ ನಂತರ ಆ ಮಗುವನ್ನು ಜಾತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗ ಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು.
- ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ಗೌರವ ಸೂಚಕವಾಗಿ ವಿಶ್ವ ಮಾನವ ದಿನವನ್ನು ಆಚರಿಸಲಾಗುವುದು.
ಎಂದಿನಿಂದ ಆಚರಿಸಲಾಗುವುದು?
- ಕರ್ನಾಟಕ ಸರ್ಕಾರ 2015 ರ ಡಿಸೆಂಬರ್ ನಲ್ಲಿ ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರಿಗೆ ಗೌರವ ಸೂಚಿಸಲು ಪ್ರತಿವರ್ಷ ಡಿಸೆಂಬರ್ 29 ರಂದು ವಿಶ್ವ ಮಾನವ ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿತು.
ಡಿಸೆಂಬರ್ 29 ರಂದೇ ಏಕೆ?
- ಕುವೆಂಪು ಅವರು 1904 ಡಿಸೆಂಬರ್ 29 ರಂದು ಜನಿಸಿದರು.
- ಕುವೆಂಪು ಅವರ ಜನ್ಮದಿನಾಚರಣೆ ಅಂಗವಾಗಿ ವಿಶ್ವ ಮಾನವ ದಿನವನ್ನಾಗಿ ಆಚರಿಸಲಾಗುತ್ತದೆ.
ವಿಶ್ವಮಾನವ ಗೀತೆ:
ಓ ನನ್ನ ಚೇತನ
ಆಗು ನೀ ಅನಿಕೇತನ!
ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!
ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!
ಎಲ್ಲಿಯೂ ನಿಲ್ಲದಿರು;
ಮನೆಯನೆಂದೂ ಕಟ್ಟದಿರು;
ಕೊನೆಯನೆಂದೂ ಮುಟ್ಟದಿರು;
ಓ ಅನಂತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!
ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯಯೋಗಿ;
ಅನಂತ ನೀ ಅನಂತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!
- ಕುವೆಂಪು
ಈ ದಿನದ ಕಾರ್ಯಕ್ರಮಗಳು:
- ಕಡ್ಡಾಯವಾಗಿ ಕರ್ನಾಟಕದ ಎಲ್ಲಾ ಪಾಠಶಾಲೆಗಳಲ್ಲಿ ಈ ದಿನವನ್ನು ಆಚರಿಸುವರು.
- ಕುವೆಂಪು ಅವರ ಭಾವಗೀತೆ, ಕವನ, ಹಾಡುಗಳನ್ನು ಹಾಡುವುದರ ಮೂಲಕ ಇಂದಿನ ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಕುವೆಂಪು ಅವರ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುವುದು
- ರಾಜ್ಯ ಸರಕಾರದ ವತಿಯಿಂದಲೇ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕುವೆಂಪು ಅವರ ವಿಶೇಷ ಗೀತಗಾಯನ ಹಾಗೂ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಗುವುದು.
ಕುವೆಂಪು ಅವರ ಬಗ್ಗೆ:
- ಜನನ: 1904 ಡಿಸೆಂಬರ್ 29
- ಜನ್ಮಸ್ಥಳ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗಿ
- ಮರಣ: 1994 ನವೆಂಬರ್ 11
- ಅಂತ್ಯ ಸಂಸ್ಕಾರ ಸ್ಥಳ: ಕುಪ್ಪಳಿ, ಶಿವಮೊಗ್ಗ ಜಿಲ್ಲೆ
- ಹೆಂಡತಿ: ಹೇಮಾವತಿ
- ಮಕ್ಕಳು: ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ
- ಪೂರ್ಣ ಹೆಸರು: ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
- ಕಾವ್ಯನಾಮ: ಕುವೆಂಪು
- ಆತ್ಮಚರಿತ್ರೆ: ನೆನಪಿನ ದೋಣಿಯಲ್ಲಿ
- ಮಹಾಕಾವ್ಯ: ಶ್ರೀರಾಮಾಯಣ ದರ್ಶನಂ (1949)
- ಸ್ಮಾರಕಗಳು: ಕುಪ್ಪಳ್ಳಿಯಲ್ಲಿ ಕವಿಮನೆ ಎಂಬ ವಸ್ತು ಸಂಗ್ರಹಾಲಯ. ಶಿವಮೊಗ್ಗದ ಸಹ್ಯಾದ್ರಿಯಲ್ಲಿರುವ ವಿವಿಗೆ ಕುವೆಂಪು ವಿವಿ ಎಂಬ ಹೆಸರು. ಮೈಸೂರು ವಿವಿಯ ಕನ್ನಡ ಅಧ್ಯಯನ ಸಂಸ್ಥೆಗೆ ಕುವೆಂಪು ಹೆಸರು.
- ಕನ್ನಡದ ಮೊದಲನೆಯ ರಾಷ್ಟ್ರಕವಿ - ಎಂ.ಗೋವಿಂದ ಪೈ.
- ಕನ್ನಡದ ಎರಡನೆಯ ರಾಷ್ಟ್ರಕವಿ - ಕುವೆಂಪು.
- ಕನ್ನಡದ ಮೂರನೆಯ ರಾಷ್ಟ್ರಕವಿ - ಜಿ.ಎಸ್.ಶಿವರುದ್ರಪ್ಪ.
ಮುಖ್ಯ ಪ್ರಶಸ್ತಿಗಳು:
- 1967 ರಲ್ಲಿ ಜ್ಞಾನಪೀಠ ಪ್ರಶಸ್ತಿ (ಶ್ರೀರಾಮಾಯಣ ದರ್ಶನಂ) (ಮೊದಲ ಬಾರಿಗೆ ಕನ್ನಡಕ್ಕೆ)
- 1955 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಶ್ರೀರಾಮಾಯಣ ದರ್ಶನಂ) (ಮೊದಲ ಬಾರಿಗೆ ಕನ್ನಡಕ್ಕೆ)
- ಕರ್ನಾಟಕ ಸರ್ಕಾರ ಕೊಡುವ ಕರ್ನಾಟಕ ರತ್ನ ಪ್ರಶಸ್ತಿ (1992 ರಲ್ಲಿ) (ಮೊದಲ ವ್ಯಕ್ತಿ)
- 1987 ರಲ್ಲಿ ಪಂಪ ಪ್ರಶಸ್ತಿ (ಮೊದಲ ವ್ಯಕ್ತಿ)
- 1988 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ